ಚಿತ್ರ: ಮುಳ್ಳಿನ ಗುಲಾಬಿ

ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ

ಈ ಗುಲಾಬಿಯು ನಿನಗಾಗಿ
ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ
ನಿನಗಾಗೆ ಕೇಳೆ ಪ್ರೇಯಸಿ
ನಿನಗಾಗೆ ಕೇಳೆ ಓ ರತಿ  |೨|   ||ಪಲ್ಲವಿ||

ನನ್ನೀ ಕಣ್ಣಲಿ ಕಾತರವೇನು
ನಿನ್ನನು ಕಾಣುವ ಆತುರವೇನು ಆಹಾಂ...
ನನ್ನೀ ಕಣ್ಣಲಿ ಕಾತರವೇನು
ನಿನ್ನನು ಕಾಣುವ ಆತುರವೇನು
ಆತುರ ತರುವಾ ವೇದನೆಯೇನು |೨|
ಜೀವದ ಜೀವವು ಪ್ರಿಯತಮೆ ನೀನು

||ಈ ಗುಲಾಬಿಯು||

ನೀರನು ತೊರೆದರೆ ಕಮಲಕೆ ಸಾವು
ಹೂವನು ಮರೆತರೆ ದುಂಬಿಗೆ ಸಾವು..ಆಹಾಂ....
ನೀರನು ತೊರೆದರೆ ಕಮಲಕೆ ಸಾವು
ಹೂವನು ಮರೆತರೆ ದುಂಬಿಗೆ ಸಾವು..
ಕಾಣದೆ ಹೋದರೆ ಅರೆಕ್ಷಣ ನಿನ್ನ |೨|
ಮರುಕ್ಷಣ ಪ್ರಿಯತಮೆ ನನ್ನ ಸಾವು

||ಈ ಗುಲಾಬಿಯು||

ವರ್ಗ: ಕನ್ನಡ ಚಿತ್ರಸಾಹಿತ್ಯ
ವರ್ಗ: ಮುಳ್ಳಿನ ಗುಲಾಬಿ ಚಿತ್ರ
ವರ್ಗ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾಯನ